ಈ ವಾರ ತೆರೆಗೆ ಮತ್ತೆ ಬನ್ನಿ ಪ್ರೀತ್ಸೋಣ?
Posted date: 17 Sat, Dec 2011 ? 09:21:01 AM

ಪಿಕ್ಚರ್ ಗೇಟ್ ಸಂಸ್ಥೆಯ ’ಮತ್ತೆ ಬನ್ನಿ ಪ್ರೀತ್ಸೋಣ’ ಕನ್ನಡ ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು ಪ್ರೀತಿಸಲು ಹೃದಯ ಖಾಲಿ ಇಟ್ಟುಕೊಳ್ಳಿ ಅಂತಾರೆ ನಿರ್ದೇಶಕ ರವೀಂದ್ರ ಎಚ್.ಪಿ.


ನಿರ್ದೇಶಕ ರವೀಂದ್ರ ಅವರ ಪ್ರಕಾರ ಚಿತ್ರದಲ್ಲಿ ಹಾಡುಗಳು ೨೫ ನಿಮಿಷದಷ್ಟು ಬರಲಿದ್ದು ಪ್ರತಿ ೧೫ ನಿಮಿಷಕ್ಕೆ ಹಾಡೊಂದನ್ನು ತೆರೆಯ ಮೇಲೆ ವೀಕ್ಷಿಸಬಹುದು. ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ನಾಯಕರಾಗಿ ಇವರ ಜೊತೆ ಕರಿಷ್ಮ ತನ್ನಾ, ಸಂಜನಾ, ಕೃತಿಕಾ, ಅಮೃತ, ಯುಕ್ತಿ ಹಾಗೂ ಇನ್ನು ಕೆಲವು ಬೆಡಗಿಯರು ತೆರೆಯ ಮೇಲೆ ಕಾಣಿಸಲಿದ್ದಾರೆ. ತಬಲಾ ನಾಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಅನೂಪ್ ಸಿಳೀನ್ ಹತ್ತು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಗುರುಪ್ರಸಾದ್(ಮಠ, ಎದ್ದೇಳು ಮಂಜುನಾಥ’ ನಿರ್ದೇಶಕ ಹಾಗೂ ’ಹುಡುಗರು’ ಸಂಭಾಷಣೆಗಾg) ಈ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ.  ಅಶೋಕ್ ಕಶ್ಯಪ್ ಈ ಚಿತ್ರದ ಛಾಯಾಗ್ರಾಹಕರು.

ಇದೊಂದು ವಿಭಿನ್ನ, ವಿಶೇಷ, ಭಕ್ತಿ, ಪ್ರೀತಿ, ವಿಶ್ವಾಸ, ನೋವು ತುಂಬಿರುವ ಚಿತ್ರ ಕರ್ನಾಟಕದಾದ್ಯಂತ ೫೫ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ರಾದೇಶಿಕ ಸೆನ್ಸಾರ್ ಮಂಡಲಿ ಈ ಚಿತ್ರಕ್ಕೆ ’ಯು’ ಸರ್ಟಿಫಿಕೇಟ್ ನೀಡಿದೆ. ಈ ಚಿತ್ರವನ್ನು ಮುಂಬೈನ ವಿನಯ್ ನಾರ್ಕರ್ ಪ್ರಥಮ ಬಾರಿಗೆ ನಿರ್ಮಾಣ ಮಾಡಿದ್ದಾರೆ.


 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed